ಸಂಶೋಧನೆಯ ಹಾದಿಯಲ್ಲಿ ಒಂದು ಸಂವತ್ಸರ

ಕಳೆದ ವರ್ಷ ಅಕ್ಟೋಬರ್ ನಲ್ಲಿ ನಾನು ಜರ್ಮನಿಯಲ್ಲಿರುವ DESY ಎಂಬಲ್ಲಿ ನನ್ನ ದೀರ್ಘ ಸಂಶೋಧನೆಯನ್ನು ಶುರು ಮಾಡಿದೆ. ಒಂದು ವರ್ಷ ಎಷ್ಟು ಬೇಗ ಕಳೆದು ಹೋಯಿತೆಂದು ತಿಳಿಯುತ್ತಿಲ್ಲ. ಕಾಲ ಚಕ್ರದ ವೇಗ ಬೆಳಕಿನ ವೇಗಗಿಂತಲೂ ಹೆಚ್ಚು ಎಂಬ ಭಾವನೆ ಮೂಡುತ್ತಿದೆ. ಒಂದು ಸಂವತ್ಸರದಲ್ಲಿ ಎಷ್ಟು ಪ್ರಗತಿಯಾಗಿದೆ ಎಂದು ಅಂದಾಜಿಸಲು ಶಕ್ಯವಾಗುತ್ತಿಲ್ಲ. ಪ್ರಗತಿಯನ್ನು ಹೇಗೆ ಮೌಲ್ಯಮಾಪನ ಮಾಡಬೇಕು? ಹೊಸದಾಗಿ ಕಲಿತ ವಿಷಯಗಳಿಂದಲೋ, ಪ್ರಯೋಗಾಲಯದಲ್ಲಿ ಸಾಧಿಸಿದ ಪರಿಣಾಮಗಳಿಂದಲೂ, ಏನಾದರೂ ಹೊಸದಾಗಿ ಸಿದ್ಧಿಸಿರುವುದೋ ಅಥವಾ ಇವುಗಳೆಲ್ಲವನ್ನು ಒಳಗೊಂಡಿರುವ ಸಮೀಕರಣವೋ ದೇವರೇ ಬಲ್ಲ.  ಈ ಲೇಖನದಲ್ಲಿ ನಾಕಂಡಂತೆ ನನ್ನ ಮೊದಲ ವರ್ಷದ ಅನುಭವವನ್ನು ತಮ್ಮೊಂದಿಗೆ ಹಂಚಿಕೊಂಡಿದ್ದೇನೆ.

ಈ ದೀರ್ಘ ಸಂಶೋಧನೆಯ ಕಾಲದಲ್ಲಿ ಹಲವಾರು ವಿಷಯಗಳು ನಮ್ಮೆದುರಿಗೆ ಸವಾಲಾಗಿ ನಿಲ್ಲುತ್ತವೆ. ಒಂದೊಂದೇ ಸವಾಲನ್ನು ಸ್ವೀಕರಿಸುತ್ತಾ, ವೈಜ್ಞಾನಿಕವಾಗಿ ಅದಕ್ಕೆ ಉತ್ತರವನ್ನು ಹುಡುಕಬೇಕು. ಪ್ರತೀ ಸವಾಲನ್ನು ಸ್ವೀಕರಿಸಿ ಅದನ್ನು ಮೆಟ್ಟಿನಿಲ್ಲುವುದೇ ಸಂಶೋಧನೆಯ ಗುರಿ. ಆದರೆ ಪ್ರಕೃತಿಯ ಚೌಕಟ್ಟಿನೊಳಗೆಯೇ ಭೌತಿಕವಾದ ಉತ್ತರವನ್ನು ಹುಡುಕಬೇಕು. ಎಲ್ಲಾ ಸವಾಲುಗಳು ಒಂದೇ ತೆರೆನಾಗಿ ಇರುವುದಿಲ್ಲ. ಎಲ್ಲದಕ್ಕೂ ಒಂದೇ ರೀತಿಯ ಉತ್ತರ ಹುಡುಕುವ ಪದ್ಧತಿ ಫಲ ನೀಡುವುದಿಲ್ಲ. ನಮ್ಮ ಮುಂದಿರುವ ಒಂದು ದೊಡ್ಡ ಸವಾಲನ್ನು, ಚಿಕ್ಕ-ಚಿಕ್ಕ ಪ್ರಶ್ನೆಗಳಾಗಿ ಪರಿವರ್ತಿಸಿ ಪ್ರತೀ ಪ್ರಶ್ನೆಗೆ ಉತ್ತರ ಹುಡುಕಬೇಕು. ಸರಿಯಾದ ಉತ್ತರವನ್ನು ಪಡೆಯಲು ಅದಕ್ಕನುಗುಣವಾದ ಜ್ಞಾನವನ್ನು ಹೊಂದಿರುವದು ಅತ್ಯವಶ್ಯ. ಆದರೆ ಜ್ಞಾನವನ್ನು ಸಿದ್ಧಿಸಿಕೊಳ್ಳುವುದು ಹೇಗೆ? ಎಲ್ಲಿಂದ ಮತ್ತು ಹೇಗೆ ಪಡೆಯಬಹುದು? ಇದಕ್ಕೆ ನಾ ಕಂಡುಕೊಂಡ ಉತ್ತರ :

आचार्यात् पादमादत्ते पादं शिष्यः स्वमेधया ।

सब्रह्मचारिभ्यः पादं पादं कालक्रमेण च ॥

ನಮ್ಮ ಪೂರ್ವಜರು ಹೇಳಿರುವ ಪ್ರಕಾರ ನಮ್ಮ ಜ್ಞಾನದ ಕಾಲು ಭಾಗ ಗುರುಗಳಿಂದಲೂ, ಕಾಲು ಭಾಗ ಸ್ವಪ್ರಯತ್ನದಿಂದಲೂ, ಕಾಲು ಭಾಗ ಸಹವರ್ತಿಗಳಿಂದಲೂ ಹಾಗು ಕೊನೆಯ ಕಾಲು ಭಾಗ ಅನುಭವದಿಂದಲೂ ಸಿದ್ಧಿಸುತ್ತದೆ. ಇಂತಹ ಒಳ್ಳೆಯ ಸಂದೇಶಗಳನ್ನು ಸ್ವಾನುಭಾವದ ಮೂಲಕ ಆಸ್ವಾದಿಸುತ್ತಿರುವ ನಾನು ಧನ್ಯ. ಕೆಲವೊಮ್ಮೆ ಅತೀ ಸರಳ ಪ್ರಶ್ನೆಗಳಿಗೆ ನೇರವಾದ ಉತ್ತರಗಳು ಸಿಗುವುದಿಲ್ಲ. ಆಗ ಗುರುಗಳು ಅಥವಾ ಸಹವರ್ತಿಗಳ ಬಳಿ ಸಮಾಲೋಚಿಸುವುದು ಉತ್ತಮ. ಇನ್ನು ಕೆಲವೊಮ್ಮೆ ಕೆಲವೊಂದು ಕ್ಲಿಷ್ಟ ಪ್ರಶ್ನೆಗಳಿಗೆ ಅತೀ ಸರಳ ಉತ್ತರಗಳು ದೊರೆಯಬಹುದು. ಆದರೆ ಅದಕ್ಕೆ ಅನುಭವ ಬೇಕು. ಉದಾಹರಣೆಗೆ ಸತ್ಯೇಂದ್ರನಾಥ ಬೋಸರು ಕಂಡು ಹಿಡಿದ ಬೋಸೋನ್ (Boson). ಅವರಲ್ಲಿದ್ದ ಜ್ಞಾನ ಮತ್ತು  ಅನುಭವವೇ ಬೋಸೋನ್ ಸಮೀಕರಣವನ್ನು ರೂಪಿಸಿತು.

ಈ ಆರಂಭಿಕ ಸಂಶೋಧನಾ ವರ್ಷಗಳು ಹೆಚ್ಚೆಚ್ಚು ಅನುಭವಗಳನ್ನು ನೀಡುತ್ತವೆ. ಅನೇಕ ಪ್ರಯೋಗಗಳ ಫಲಿತಾಂಶ ಆಶ್ಚರ್ಯಕರವಾಗಿಯೂ ಅಥವಾ ವ್ಯತರಿಕ್ತಕರವಾಗಿಯೂ ಇರುತ್ತದೆ. ಪ್ರತಿಯೊಂದು ಫಲಿತಾಂಶವನ್ನು ಕೂಲಂಕುಷವಾಗಿ ಅಧ್ಯಯನ ಮಾಡಿ ಎಲ್ಲವನ್ನೂ ತಿಳಿದುಕೊಂಡಾಗ ಮಾತ್ರವೇ ಆ ವಿಷಯವು ಸಿದ್ಧಿ ದೊರೆಯುತ್ತದೆ. ಈ ವೈಜ್ಞಾನಿಕ ಕ್ಷೇತ್ರದಲ್ಲಿ ನನ್ನ ಪಯಣ ಇದೀಗ ಆರಂಭವಾಗಿದೆ. ಇನ್ನೂ ಈ ಯಾನ ಬಹು ದೂರ ಸಾಗಬೇಕಿದೆ.

ಇತ್ತೀಚಗೆ ಸಫಲವಾದ ಮಂಗಳಯಾನವೇ ನನ್ನ ಈ ಯಾನಕ್ಕೆ ವೇಗೋತ್ಕರ್ಷ…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s