‘ಅನಂತದ ಒಡನಾಟದಲ್ಲಿ’ ಎಂಬ ಹೊತ್ತಿಗೆಯೊಳಗೆ

ವಿಶ್ವ ಶ್ರೇಷ್ಠ ಗಣಿತ ಮೇಧಾವಿ ಶ್ರೀನಿವಾಸ ಅಯ್ಯ೦ಗಾರ್ ರಾಮಾನುಜನ್ ರವರ ಹೆಸರನ್ನು ಯಾರು ಕೇಳಿಲ್ಲ ಹೇಳಿ? ಅವರ ಜೀವನದ ಕುರಿತು ನಾವೆಲ್ಲರೂ ಅಲ್ಲಿ-ಇಲ್ಲಿ, ಅಲ್ಪ-ಸ್ವಲ್ಪ ಕೇಳಿದ್ದೇವೆ ಹಾಗೂ ಓದಿದ್ದೇವೆ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ರಾಬರ್ಟ್ ಕಾನಿಗೆಲ್ ಎಂಬ ವಿಜ್ಞಾನ ಬರಹಗಾರರು ರಾಮಾನುಜನರ ಜೀವನ ಚರಿತ್ರೆಯನ್ನು ಸವಿಸ್ತಾರವಾಗಿ ಬರೆದು “The Man Who Knew Infinity : A Life of the Genius Ramanujan” ಎಂಬ ಶೀರ್ಷಿಕೆಯಡಿ ಪುಸ್ತಕವನ್ನು ಹೊರತಂದರು. ಕಳೆದ ವರ್ಷದ ಡಿಸೆಂಬರ್ ಮಾಸದಲ್ಲಿ ಆ ಪುಸ್ತಕವನ್ನು ಬೆಂಗಳೂರಿನ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯ ಸೆಂಟರ್ ಫಾರ್ ಅಪ್ಲಿಕೆಬಲ್ ಮ್ಯಾಥಮ್ಯಾಟಿಕ್ಸ್ ನಲ್ಲಿ ಪ್ರಾಧ್ಯಾಪಕರಾದ ಸಿ.ಎಸ್. ಅರವಿಂದರವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಆ ಪುಸ್ತಕ ಶೀರ್ಷಿಕೆಯೇ “ಅನಂತದ ಒಡನಾಟದಲ್ಲಿ ಅರಳಿದ ಅಸಾಧಾರಣ ಗಣಿತ ಪ್ರತಿಭೆ ರಾಮಾನುಜನ್”.1
ಲೇಖಕರೇ ಹೇಳುವಂತೆ ಈ ಪುಸ್ತಕದಲ್ಲಿಯ ರಾಮಾನುಜನ್ ಕಥೆಯು, ಒಬ್ಬ ಸಾಮಾನ್ಯನಾದ, ಅರ್ಥವ್ಯಾಪ್ತಿಗೆ ಸಿಲುಕದ, ಮೇಧಾವಿಯ ಹಾಗೂ ಸರಳಜೀವಿಯ ಒಂದು ಕಥೆ. ಇದು, ಪಾಶ್ಚಿಮಾತ್ಯ ದೇಶಗಳ ಹಾಗೂ ಭಾರತದ ಸಂಪ್ರದಾಯಗಳ ಜಗ್ಗಾಟದ ಕಥೆ-ರಾಮಾನುಜನ್ ಬೆಳೆದ ದಕ್ಷಿಣ ಭಾರತದ ಕುಂಭಕೋಣದ ಸಾರಂಗಪಾಣಿ ಸನ್ನಿಧಿ ರಸ್ತೆಯ ಸಾಧಾರಣ ಪ್ರಪಂಚವು ಒಂದೆಡೆಯಾದರೆ, ಝಗಝಗಿಸಿಬೀಗುತ್ತಿದ್ದ ಕೇಂಬ್ರಿಜ್ ಇನ್ನೊಂದೆಡೆ. ತಾರ್ಕಿಕ ನಿಲುವುಗಳ ಆಧಾರದ ಮೇಲೆಯೇ ನಿಂತ ಪಾಶ್ಚಿಮಾತ್ಯ ಗಣಿತ ಪರಂಪರೆ ಒಂದು ಕಡೆಯಾದರೆ, ಅದಕ್ಕೆ ಸವಾಲಾಗಿ ಪೂರ್ವ-ಪಶ್ಚಿಮಗಳೆರಡನ್ನೂ ಸಮನಾಗಿ ಬೆರಗುಗೊಳಿಸಿದ ರಾಮಾನುಜನ್ ನ ನಿಗೂಢ ಹಾಗೂ ಚಮತ್ಕಾರಿಕ ಅಂತಃಸತ್ವದ ಕಥೆ ಇನ್ನೊಂದು ಕಡೆ. ಅಗಾಧ ಪ್ರತಿಭೆಯೊಂದನ್ನು ಗುರುತಿಸಿದ ನಂತರ ಮುಂದಿನ ಕಾರ್ಯ ಏನು ಎಂಬುದರ ಬಗ್ಗೆಯೂ ಈ ಕಥೆ ತಿಳಿಸುತ್ತದೆ.
೫೦೦ಕ್ಕೂ ಹೆಚ್ಚು ಪುಟಗಳನ್ನು ಹೊಂದಿರುವ ಈ ಪುಸ್ತಕದ ಮೂಲ ಬೆಲೆ ರೂ. ೪೮೦ ಮಾತ್ರ. ಈ ಪುಸ್ತಕವು ನ್ಯಾಷನಲ್ ಬುಕ್ ಟ್ರಸ್ಟ್ (NBT), ಇಂಡಿಯಾ ಇವರಿಂದ ಪ್ರಕಾಶಿತವಾಗಿದೆ. ಈ ಪುಸ್ತಕವನ್ನು ಬೆಂಗಳೂರಿನ ಬನಶಂಕರಿಯಲ್ಲಿರುವ NBT ಮಳಿಗೆಯಿಂದಲೂ ಅಥವಾ NBTಯ ಅಂತರ್ಜಾಲ ಪುಟದಿಂದಲೂ ಖರೀದಿಸಬಹುದು. ಇಂತಹ ಮಹಾಪುರುಷರ ಬಾಳು ಬಂಡಿಯ ಪಯಣವನ್ನು ಓದುವಾಗ ನಮ್ಮಲ್ಲಿ ಹೊಸ ವಿಚಾರಗಳು ಮೂಡುತ್ತವೆ. ನಮ್ಮ ಕೆಲವೊಂದು ಸಂದೇಹಗಳಿಗೆ ಉತ್ತರಗಳು ದೊರೆಯುವುದು ನಿಜ. ಕನ್ನಡದಲ್ಲಿ ರಾಮಾನುಜನ್ ರ ಸಂಪೂರ್ಣ ಜೀವನ ಚರಿತ್ರೆ ಹೊರಬಂದಿರುವುದು ನಮ್ಮ ಭಾಗ್ಯ. ಈ ಪುಸ್ತಕವು ಮಹಾನ್ ಪ್ರತಿಭೆ ರಾಮಾನುಜನ್ ರ ಸಮಗ್ರ ಜೀವನದ ಕಥೆಯೊಂದಿಗೆ ನಮ್ಮ ಜೀವನಕ್ಕೂ ಒಂದು ಸ್ಫೂರ್ತಿ ನೀಡುತ್ತದೆ.

ಕದಡಿದ ಕಣಿವೆ

ಭಾರತದ ಮುಕುಟವಾದ ಕಾಶ್ಮೀರದ ಕಣಿವೆಯಲ್ಲಿ ಪಂಡಿತರ ಮೇಲೆ ನಡೆದ ದೌರ್ಜನ್ಯದ ತುಣುಕುಗಳನ್ನು ಹಾಗು ಅದರಿಂದ ಆದ (ಇನ್ನೂ ಆಗುತ್ತಿರುವ) ದುಷ್ಪರಿಣಾಮಗಳ ಒಂದು ಮುಖವನ್ನು ಈ ಪುಸ್ತಕ ತೋರಿಸುತ್ತದೆ. ಲೇಖಕ ರಾಹುಲ ಪಂಡಿತರು ಮತ್ತು ಅವರ ಸಂಭಂದಿಕರು ಹಾಗೂ ಅವರ ಗೆಳೆಯರು ಅನುಭವಿಸಿದ ಕಷ್ಟ-ಕೋಟಲೆಗಳು ಒಂದೆಡೆಯಾದರೆ, ನಮ್ಮ ಸರ್ಕಾರದ ಮತ್ತು ಮಾಧ್ಯಮದ ನಿರ್ಲಿಪ್ತತೆ ಎದ್ದು ಕಾಣುತ್ತದೆ. ನಮ್ಮ ದೇಶದಲ್ಲಿ ನಮ್ಮವರೇ ನಿರಾಶ್ರಿತರಾಗಿ ಬದುಕುವುದು ಜೀರ್ಣಿಸಿಕೊಳ್ಳಲಾಗದ ಕಟು ಸತ್ಯ. ಈ ಪುಸ್ತಕವನ್ನು ಓದಿದ ನಂತರ ನನ್ನ ಮನಸ್ಸಿನಲ್ಲಿ ಉಳಿಯುವ ಕೊನೆಯ ಪ್ರಶ್ನೆಯೇನೆಂದರೆ :  ಲಕ್ಷಾಂತರ ಟಿಬೆಟಿನ ನಿರಾಶ್ರಿತರಿಗೆ ಹಲವು ದಶಕಗಳಿಂದ ಎಲ್ಲಾ ಸೌಲಭ್ಯಗಳನ್ನು ನೀಡಿ, ಪಾಲಿಸಿ, ಪೋಷಿಸುತ್ತಿರುವ ಭಾರತಕ್ಕೆ, ನಮ್ಮ ಮನೆಯ ಪಂಡಿತರನ್ನು ಬೀದಿಯಲ್ಲಿರಿಸಿರುವುದು ಏಕೆ? ಸರ್ಕಾರಗಳು ಮತ್ತು ಮಾಧ್ಯಮಗಳು ಕಿವುಡು ಮೌನದ ಕಟುಕರಂತೆ ವರ್ತಿಸುವುದರ ಹಿಂದಿರುವ ಮರ್ಮವೇನು?

Screenshot_2015-11-02-20-20-26
ಕದಡಿದ ಕಣಿವೆಕದಡಿದ ಕಣಿವೆ

 

ಮಹತ್ತರವಾದ ಸಮೀಕರಣಗಳು

ಮಹತ್ತರವಾದ ಸಮೀಕರಣಗಳು (The great equations) ಒಂದು ಆಂಗ್ಲ ಭಾಷೆಯ ಪುಸ್ತಕ. ಇದನ್ನು ಬರೆದವರು ರಾಬರ್ಟ್ ಕ್ರೀಸ್. ಸಮೀಕರಣಗಳ ಮೂಲಕ ವಿಶ್ವದ ಸೌಂದರ್ಯ ಅನಾವರಣಗೊಳ್ಳುವುದನ್ನು ಅದ್ಭುತವಾಗಿ ದಾಖಲಿಸಿದ್ದಾರೆ. ಈ ಪುಸ್ತಕದಲ್ಲಿ ಒಟ್ಟು ಹತ್ತು ಅಧ್ಯಾಯಗಳಿವೆ. ಆದಿ ಗೊತ್ತಿರದ ಪೈಥಾಗೊರಸನ ನಿಯಮದಿಂದ ಶುರುವಾಗಿ ಐನ್‍ಸ್ಟೈನ್‍ರ ಪ್ರಸಿದ್ಧ E=mc  ಸಮೀಕರಣಗಳನ್ನೋಳಗೊಂಡಂತೆ ವಿಶ್ವದ ಒಂಬತ್ತು ಮಹತ್ತರ ಸಮೀಕರಣಗಳ ಉಗಮದ ಕಾರಣಗಳನ್ನು ಮತ್ತು ಆ ಕಾಲದ ಚರಿತ್ರೆಯನ್ನು ಬರೆದಿದ್ದಾರೆ. ಈ ಪುಸ್ತಕವು ಕೇವಲ ಗಣಿತಜ್ಞರಿಗೆ ಅಥವಾ ವಿಜ್ಞಾನಿಗಳಿಗೆ ಸೀಮಿತವಾಗಿರದೇ ಜನಸಾಮಾನ್ಯರಿಗೂ ಸರಳವಾಗಿ ತಲುಪುವಂತೆ ರಚಿಸಿದ್ದಾರೆ. ಸೃಷ್ಟಿಕರ್ತನ ಕೆಲವೊಂದು ಲೀಲೆಗಳನ್ನು ಈ ಮಾನವ ಗಣಿತದ ಮೂಲಕ ಹೇಗೆ ಅರ್ಥೈಸಿಕೊಂಡಿರವನು ಎಂದು ತಿಳಿಯುವ ಇಚ್ಚೆಯಿರುವವರಿಗೆ ಈ ಪುಸ್ತಕ ಒಂದು ದಾರಿದೀಪ.

51lwsBBSrNL._SX328_BO1,204,203,200_

ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಚರಿತ್ರೆ

ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಸ್ಥಾಪನೆ, ಅದರ ಬೆಳವಣಿಗೆ ಮತ್ತು ಇಸ್ರೋ-ಕುಟುಂಬ ನಡೆದು ಬಂದ ಹಾದಿಯ ಸಂಪೂರ್ಣ ಚಿತ್ರ ಈ ಪುಸ್ತಕದಲ್ಲಿ ದೊರೆಯುತ್ತದೆ. ವಿಕ್ರಮ ಸಾರಾಭಾಯಿರವರ ದೂರದರ್ಶಿತ್ವದಲ್ಲಿ  ಜನ್ಮತೆಳೆದ ಭಾಬಾ-ಸಂಸ್ಥೆಯ ಪ್ರತೀ ಹೆಜ್ಜೆಯೂ ಕಣ್ಣಿಗೆ ಕಟ್ಟುವಂತೆ ಈ ಪುಸ್ತಕದಲ್ಲಿ ಮೂಡಿ ಬಂದಿದೆ. ಇತಿಹಾಸದ ಜೊತೆಜೊತೆಗೆ ಇಸ್ರೋ ಯೋಜನೆಗಳ ತಾಂತ್ರಿಕ ಅಂಶಗಳನ್ನು ಕುರಿತಾಗಿಯೂ ಬಹಳಷ್ಟು ಲೇಖನಗಳಿವೆ.

ನಮ್ಮ ದೇಶದ ಬೆಳವಣಿಗೆ ಮತ್ತು ರಕ್ಷಣೆಯಲ್ಲಿ ಇಸ್ರೋ ಪಾತ್ರ ದೊಡ್ಡದಾಗಿರುವುದಲ್ಲದೇ ಇನ್ನೂ ಹೆಚ್ಚುತ್ತಲೇ ಹೋಗುತ್ತಿರುವುದು. ಸಾರಾಭಾಯಿರವರ ಎಲ್ಲ ಕನಸುಗಳನ್ನು ಸಾಕಾರಗೊಳಿಸಿ ೨೧ನೇ ಶತನಮಾನಕ್ಕೆ ಅನುಗುಣವಾಗಿರುವ ಮಹತ್ತ-ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿರುವ ನಮ್ಮ ಬಲಾಢ್ಯ ಬಾಹ್ಯಾಕಾಶ ಸಂಸ್ಥೆಯ ಕುರಿತು ಹೆಚ್ಚೆಚ್ಚು ತಿಳಿಯಲು ಈ ಆಸಕ್ತಿದಾಯಕವಾದ ಪುಸ್ತಕವನ್ನು ಓದಲು ಮರೆಯದಿರಿ.

red